Thursday, November 15, 2012

ಪರಮಾತ್ಮ

My poem was published in Suddi Bidugade on 12th Nov 2012
 
ಪರಮಾತ್ಮ

ಹರಿವ ನೀರಿಗೆ ನಿರಂತರ ಸೆಳೆತವಾಗಿ
ಬಾಂದಳದಲಿ ಬೆಳಗುವ ರವಿಗೆ ಶಕ್ತಿಯಾಗಿ
ಸದಾ ಪರಿಭ್ರಮಣಕೆ ಭೂಮಿಯ ಕಕ್ಷೆಯಾಗಿ
ಅರಳಿದ ಹೂವಿನ ಎಸಳಿನ ಕೆಂಪು ನೀನಾಗಿ

ಕುಲಕೋಟಿಯಭ್ಯುದಯದ ಪ್ರೀತಿಯಾಗಿ
ಬೀಸುವ ಗಾಳಿಯಲಿ ಬೆರೆತ ಉಸಿರಾಗಿ
ಹಾಡುವ ಹಕ್ಕಿಗೊರಳಿನ ನಾದವಾಗಿ
ಕಂಪಾಗಿ, ತಂಪಾಗಿ, ಸೊಂಪಾಗಿ, ಇಂಪಾಗಿ

ಕೋಟಿಸಂಖ್ಯೆಯ ದಾನವರ ನಡುವೆ ಓರ್ವ ಸಂತನಾಗಿ
ಶೂನ್ಯದೊಳಗಿನನಂತ ಬ್ರಹ್ಮಾಂಡವಾಗಿ
ಅನಂತ ದಿಗಂತದಾಚೆಗಿನ ಶೂನ್ಯ ನೀನಾಗಿ
ನಿನ್ನೆ ನಾಳೆಗಳ ನಡುವಿನ ಇಂದು ನೀನಾಗಿ

ನಿರಂತರ ನಿರೀಕ್ಷೆಗಳ ಅಂತ್ಯ ನೀನಾಗಿ
ಪಿತನಾಗಿ ಸುತನಾಗಿ ಸತಿಯಾಗಿ ಪತಿಯಾಗಿ
ಮಾತೆ ಮಮತೆಯ ನಿರ್ಮಲ ಜಲಧಿಯಾಗಿ
ಅಂತರಾತ್ಮದೊಳಗಿನ ಏಕಾಂತ ಸತ್ಯವಾಗಿ

ಜ್ಞಾನ ವಿಜ್ಞಾನಗಳ ಸಂಯುಕ್ತವಾಗಿ
ಸತ್ಯಪಥವಾಗಿ ಶಿಷ್ಟರಕ್ಷಕನಾಗಿ
ಬಿಂದುವಲಿ, ಸಿಂಧುವಲಿ, ಜೀವದಲಿ, ಆತ್ಮದಲಿ
ಬೆರೆತ ಅಮೂರ್ತ ಮೂರ್ತಿಯೇ. . .
       ನಿನಗೆ ಕೋಟಿ ನಮಸ್ಕಾರ...


http://news.suddimahithi.com/puttur/news.asp?s_dateentry=12%2F11%2F2012&econtentPage=4

Thursday, November 8, 2012

ಹಣ ಸುಡುವ ಹಬ್ಬ...

ಸುಡಬೇಡ ಹಣವನೀ, ಕಡಿವತೆರ ಕೊಡಲಿಯಲಿ
ಕುಳಿತ ಕೊಂಬೆಯ ಮೂಢ ಅಡವಿಯೊಳಗೆ...
ಸತ್ಕಾರ್ಯಗಳ ನಡೆಸಿ , ದಾನಾದಿಗಳನಿತ್ತು
ಸಂತಸವ ಕಾಣುತಿರು ದೀನರೊಳಗೆ...  ---- ಲ.ನಾ.ಭಟ್ಟ

Tuesday, October 23, 2012

ಉಸಿರು...

ಕಾವ್ಯವಾಗದೇ ಕಣವು ಕವಿಯು ಜೀವದ ಲೇಪವಿಡಲು
ನೃತ್ಯವಾಗುವುದು ಹೆಜ್ಜೆ ತಾಳ ಮೇಳಗಳ ಪ್ರೀತಿಯಲಿ ವರಿಸಿರಲು
ಕಲೆಯಾಗದೇ ಬರಿಯ ಕಲೆ-ಕಲೆ-ಯೆಂಬ ಬಣ್ಣಗಳು
ಕಥೆಯಾಗದೆ ಸದಾ ಸಾಧನೆಯ ಪರಿಮಳವ ಸೆಳೆವುಸಿರು

Thursday, September 20, 2012

ಮಣ್ಣಬೊಂಬೆ


ಬಿಟ್ಟ ಕಣ್ಣು ಬಿಟ್ಟಂತೆ, ಮುಚ್ಚುವುದಿಲ್ಲ
ತುಟಿ ತೆರೆಯುವುದಿಲ್ಲ ಮಾತ ಹರಿವಿಲ್ಲ
ತಂಗಾಳಿಗೆ ಮುಂದೆ ಇಳಿದ ಕುರುಳು ಹಾರುವುದಿಲ್ಲ
ನಗುವಿಲ್ಲ, ಅಳುವಿಲ್ಲ, ಕೋಪ ತಾಪದ ಕಷ್ಟವಿಲ್ಲ

ಸೋನೆಯಲಿ ನೆನೆದರೆ ನೀನು ತಳಮಳವು ಎನಗಿಲ್ಲ
ಬೆಚ್ಚಗಿನ ಕಂಬಳಿಯ ಹೊದಿಕೆ ಬೇಕಿಲ್ಲ
ಆಸೆಗಳ ಬೆಟ್ಟದ ಮೇಲೆ ಮನೆಯ ಕಟ್ಟಿಲ್ಲ
ತರತರದ ಒಡವೆ ವಸ್ತ್ರಗಳ ಗೊಡವೆ ನಿನಗಿಲ್ಲ


ಕಂಬನಿಯ ಹನಿ ನಿನ್ನ ಅಕ್ಷಿಯಲಿ ಕಾಣಲಿಲ್ಲ
ಸುಖದ ಹಂಬಲವಿಲ್ಲ ದುಃಖದಲೆಯಿಲ್ಲ
ಸದಾ ಮೊರೆವ ಸಾಗರದ ಅಲೆಯ ತೆರದಿ
ನಿತ್ಯನಿರಂತರ ಭಾವದಂತೆ ನೀನು

ಬಂಧನದ ಬದುಕಲ್ಲ, ನಿತ್ಯ ಸಂಘರ್ಷವಿಲ್ಲ
ಮಾತನಾಡದ ಮೂಕ ಜೀವ
ಹಿಂದೆ ಮುಂದಿನ ಕಾಲ ಭೇದವಿಲ್ಲ
ಸಾಗರವ ಸೇರ್ವ ನದಿ ಹಾದಿಯಂತೆ ನೀನು



ಸ್ಫೂರ್ತಿಸೆಲೆ ಜೀವಕಲೆ, ಜೀವದಾತ್ಮ ನೀನು 
ಚಿತ್ರವೊಂದೇ ನಿನದು ನೋಟಗಳು ಮಾತ್ರ ಬೇರೆ
ಹಲವು ತೆರನಾದ ಬಣ್ಣ ಕಾಂಬುದೆನಗೆ
ಬೇರೆ ಎಲ್ಲರಿಗೆ ಮಾತ್ರನೀ ಬರಿಯ ಮಣ್ಣಬೊಂಬೆ...




ದಾನವ...

ರೇಶಿಮೆಯ ಹುಳ ಬಹಳ
ನಾಜೂಕಿನಲಿ ಹೆಣೆದ
ಮನೆಯ ಮಾನವ ಕದ್ದು
ಸೀರೆ ನೇಯ್ದ

ಜೇನುಹುಳ ಸುಳಿಸುಳಿದು
ಮೈಲು ಗಟ್ಟಲೆಯಲೆದು
ಜತನದಲಿ ಕಾಯ್ದಿಟ್ಟ
ಮಧುವ ಕುಡಿದ

ಬಿಸಿಲು ಮಳೆ ಚಳಿಗಾಳಿಗಂಜದೇ
ಎದೆಯೆತ್ತಿ
ಬೃಹದ್ಗಾತ್ರದಲಿ ಬೆಳೆದ
ವೃಕ್ಷಗಳ ಸವರಿದ

ಘೋರವ್ಯಾಘ್ರವೆ ಬರಲಿ
ಕ್ರೂರ ಕರಡಿಯೆ ಇರಲಿ
ಗುರಿನೋಡಿ ಬಡಿದು
ಚಿರನಿದ್ರೆಯಲಿ ನೆಲಕೊರಗಿಸಿದ

ತನ್ನಕಾಲನೆ ಕೊಡಲಿಯಲಿ ಕಡಿವ
ಕಡುಮೂರ್ಖ ತಾನಾಗಿ
ಪ್ರಕೃತಿ ಸಂತುಲನವ
ಹಾಳ್ಗೆಡಹಿದ

ಸುತ್ತ ಧಗಧಗಿಸುವ ಬೆಂಕಿಯಲಿ, ತಂಪೆರೆವ
ಯಂತ್ರಗಳ ತಂತ್ರ  ನಿಲುವುದುಂಟೇ
ಹೊಳೆವ ನಾಣ್ಯವೆ ಇರಲಿ, ಗರಿಗರಿಯ ನೋಟಿರಲಿ,
ಅಸುವ ನೀಗಲು  ಹಸಿವೆ ತಿನಲಪ್ಪುದೇ ?





Monday, July 9, 2012

BMTC Route search , A helpful website

If you are a new comer to Bengaluru(Formally Bangalore) and wondering how to find the route number of the BMTC bus to reach your destination.
OR
If you are a Bengalru resident and want to find the easiest route to your destination.
OR
If you want to travel in BMTC leaving your two/four wheeler behind to avoid the stressful drive.
OR
If you are curious to know about BMTC bus routes.
OR else

For any other reason, you have reached here....


http://narasimhadatta.info/bmtc_query.html is the site that would help you.

All the stops and platform information is also available here.


Good work from the developer, I appreciate his efforts.

We need more such sites which would  help the visitors and people who are looking for such information.


Please note that the site admin has posted a banner at the end of the page which states that the site is not 100% accurate, Still I say it worth to have something than having nothing....

Google maps only provide the routes of Vayu Vajra buses which might not be available on all routes, I believe we can use this site with combination of Google Maps(https://maps.google.co.in/) and have a better result.

Tuesday, December 20, 2011

ಬೆಂಗಳೂರು


ಹಣದ ಹೊಳೆಯಲಿ ತೇಲಬೇಕೆಂಬ ಭ್ರಮೆಯಲಿ
ಈ ಮೂಲೆಯಿಂದಾಮೂಲೆಗೈದು ಕೆಲಸವ ಮಾಡುವರು
ಹರಕು ಮಾಸಿದ ಬಟ್ಟೆ ತೊಟ್ಟವರ ನಡುವಿನಲಿ
ಹಣವನೇ ಮೈತುಂಬ ತೊಟ್ಟವರಿಹರು

ದಿನಪೂರ್ತಿದುಡಿದು ರಸ್ತೆಬದಿಯಲಿ ಊಟ ಸವಿವವರು
ತಂಪನೆಯ ಕಛೇರಿಯಲಿ ವಿದೇಶಿ ನೈವೇದ್ಯ ಸವಿವವರು
ಪಿಜ್ಜಾ ಹಾಟುದಾಗೆಂದು ಸ್ಟೇಟಸ್ಸು ಮೆರೆವವರು
ಬ್ರಾಂಡು ಬ್ರಾಂಡೆಂದು ಹಣದ ಮಳೆ ಸುರಿವವರು

ಸಂಬಂಧಗಳ ಮರೆತು ತಂತ್ರ-ಅಜ್ನಾನದಲಿ ಕಳೆದವರು
ಆಂತರಿಕ ಭಾಂದವ್ಯ ಮರೆತವರು ಅಂತರ್ಜಾಲದಲಿ ಮೋರೆ ಕಾಂಬವರು
ಗಂಡ ಹೆಂಡತಿ ಮುಖವ ವಾರಕ್ಕೊಮ್ಮೆ ಕಾಂಬವರು
ಸಿನೆಮಾ ಪಾರ್ಟಿ ಎನುತ ತಮ್ಮವರ ಮರೆತವರು

ಹತ್ತು ಹೆಜ್ಜೆಗಳಾ ನಡೆಯರೀ ಮೊಂಡು ಜನರು
ಸಂಜೆ ಬೆಳಗೆನದೆ ಜಿಮ್ಮೊಳಗೆ ಮೈಮರೆವವರು
ಒಣದ್ರಾಕ್ಷೆ ಸಿಹಿಯೆಂದು ಭ್ರಮೆಯಲಿರುವವರು
ನಮ್ಮೀ ಬೆಂಗಳೂರಿಗರು ಸಂತೃಪ್ತ ಮಹಾಜನಗಳಿವರು...

ಸ್ವಾರ್ಥಿ...





ನಾನು ಸ್ವಾರ್ಥಿ...
ದಿನಬೆಳಗೆದ್ದು ಬಿ ಎಂ ಟೀ ಸಿ ಬಸ್ಸಲಿ
ಸ್ಪರ್ಧೆಯಲಿ ಬಿದ್ದೆದ್ದು ಸೀಟುಗಿಟ್ಟಿಸುವವ ನಾನು ಸ್ವಾರ್ಥಿ
ಹೊಂಡಗುಂಡಿಯ ರಸ್ತೆಗಳ, ತೆರೆದ ಮೋರಿಗಳ
ಹೊಲಸು ರಾಜಕಾರಣಿಗಳ ಬೈಯುತ್ತ ದಿನಗಳೆವ ನಾನು ಸ್ವಾರ್ಥಿ

ಕಾಲನೆಳೆಯುತ್ತ ಕಛೇರಿಗೆ ನಡೆಯುತ್ತ
ಕಾಲಹರಣವಗೈದು ಕೆಲಸ ಮಾಡುತಲಿರ್ಪ ನಾನು ಸ್ವಾರ್ಥಿ
ರಸ್ತೆಯಲಿ ಬಿದ್ದ ಕಸದ ರಾಶಿಯ ನಾತಕ್ಕೆ ಮೂಗ ಮುಚ್ಚುತ,
ಕಂಡರೂ ಕಾಣದೊಲು ನಡೆವವನು ನಾನು ಸ್ವಾರ್ಥಿ

ಮಹಾನಗರದಲಿ ಬದುಕುವವ ನಾನು
ಮಾಲೀಕ ಹೇಳಿದ ಬಾಡಿಗೆಯ ಸುರಿದು ಮತ್ತೆ ಸಂಬಳಕೆ ಕಾವ ನಾನು ಸ್ವಾರ್ಥಿ
ಹಗಲು ದರೋಡೆಯ ಗೈವ ಆಟೊ ಚಾಲಕರ ಬೈದು
ಮತ್ತದೇ ಆಟೊ ಅನಿವಾರ್ಯದಲಿ ಏರಿ ಅಲೆದಾಡುವವ ನಾನು ಸ್ವಾರ್ಥಿ

ಗೆಳೆಯರನು ಸೇರಿ ಗಂಭೀರ ಚರ್ಚೆಯಲಿ
ದೇಶದವ್ಯವಸ್ಥೆಯ ಬಗ್ಗೆ ಕೊರೆದು ಬದಲಾವಣೆಯು ಬೇಕೆಂಬೆ ನಾನು ಸ್ವಾರ್ಥಿ
ಕಟ್ಟಕಡೆಗೆನ್ನ ಪುಟ್ಟಮನೆಹೊಕ್ಕು ರಾತ್ರಿಯಲಿ
ಹೆಂಡತಿಯ ಬಿಸಿಯಪ್ಪುಗೆಯಲಿ ಮಲಗುವವ ನಾನು ಸ್ವಾರ್ಥಿ

Monday, August 29, 2011

ಗೋಮಾತೆ...

ತಾಯಂತೆ ಪೂಜಿಪರು ಉತ್ತಮರು ಧರೆಯೊಳಗೆ
ಕಡಿದು ತಿನಲೆಂತು ಮನಬರುವುದಣ್ಣಾ
ಧನ,ಧಾನ್ಯ,,ಜಲ, ಮಣ್ಣ ದೇವರೆಂದೆನ್ನುವೆವು
ಹಾಲುಣಿಸಿದವಳ ನೀ ಕೊಲುವೆ ಹೇಗಣ್ಣಾ ?


ವೇದಪಾದೆಯೊ ಇವಳು, ಹೊರುವಳೋ
ಮೂವತ್ತ ಮೂರು ಕೋಟಿ ದೇವತೆಗಳನು ?
ಗೊತ್ತಿಲ್ಲ ನಾನಿದನು, ಆದರೊಂದನು ಬಲ್ಲೆ
ಬಯಸಿಲ್ಲ ಯಾರಿಗೂ ಕೇಡನಿವಳು

ತಾ ನಡೆದ ಭೂಮಿಯನೆ ನಂದನವ ಮಾಡುವಳು
ನೋಡು ಕಣ್ಣಲಿ ಇವಳ ಮಾತೃತ್ವ ತುಂಬಿಹುದು
ಇವಳ ಮೈ ರೋಮದಲಿ ಸಂಜೀವಿನಿಯೆ ಅಡಗಿಹುದು
ಸುಮ್ಮನ್ಯಾತಕಿವಳ ನೀ ಬಲಿ ಪಡೆವೆಯಣ್ಣಾ ?

ಹುಟ್ಟಿ ಸಾಯುವ ವರೆಗು ಕಪಟವನೆ ಅರಿಯಳು
ನಿನ್ನ ಹೊಟ್ಟೆಗ ತನ್ನಮೃತವ ಸುರಿವಳು
ಕಂದನನು ಸಾಂತ್ವನ ಪಡಿಸುತ್ತ ಪೊರೆವಳು,
ಕೊನೆಗಾಲದಲಿ ಮಾರುವುದೇ ಕಿಲುಬು ಕಾಸಿಗೆ ಇವಳ..

ಬನ್ನಿರೆಲ್ಲರು ಇಂದು ಶಪಥ ಕೈಗೊಳ್ಳೋಣ
ಮಾತೆ ಇವಳನು ನಾವು ಉಳಿಸೋಣ
ಆಕೆ ಕಿವಿಗಳಿಗೆ ಕೇಳುವೊಲು ಕೂಗಿ
ರಕ್ಷಿಪೆವು ನಿನ್ನ ನಾವ್ ಎಲ್ಲ ಒಂದಾಗಿ...

Tuesday, August 23, 2011

ವೃತ್ತ ಪತ್ರಿಕೆಯಿಂದ ಗಾಂಧಿ ಟೋಪಿ ರಚಿಸುವ ವಿಧಾನ How to make a Gandhi Topi from a news paper



How to make a Gandhi Topi from a news paper.

ವೃತ್ತ ಪತ್ರಿಕೆಯಿಂದ ಗಾಂಧಿ ಟೋಪಿ ರಚಿಸುವ ವಿಧಾನ



1.Take a news paper and fold it from the center as shown in the next picture.

೧.ವೃತ್ತ ಪತ್ರಿಕೆಯನ್ನು ಮುಂದಿನ ಚಿತ್ರದಲ್ಲಿ ಕಾಣಿಸಿದಂತೆ ಇರಿಸಿ ಮಧ್ಯದಿಂದ ಮಡಿಚಿಕೊಳ್ಳಿ







2.Fold the small portion of the upper part as shown above.


೨.ಮೇಲೆ ಕಾಣಿಸಿದಂತೆ ಸ್ವಲ್ಪ ಭಾಗವನ್ನು ಮತ್ತೊಮ್ಮೆ ಮಡಿಚಿಕೊಳ್ಳಿ





3.Turn the newspaper and again fold the same way


೩.ವೃತ್ತ ಪತ್ರಿಕೆಯನ್ನು ತಿರುವಿ ಮತ್ತದೇ ರೀತಿಯಲ್ಲಿ ಮಡಚಿ






4.As shown above hold this portion and open the news paper. Now you should have a seperate portion which would be the center of our Gandhi Topi.


೪.ಈಗ ದೊರಕಿರುವ ರಚನೆಯನ್ನು ಹಿಡಿದು ವೃತ್ತಪತ್ರಿಕೆಯನ್ನು ಬಿಡಿಸಿಕೊಳ್ಳಿ.ಚಿತ್ರದಲ್ಲಿ ಕಾಣಿಸಿದಂತಹಾ ರಚನೆ ನಮ್ಮ ಗಾಂಧಿ ಟೋಪಿಯ ಮಧ್ಯಭಾಗವಾಗಿರುತ್ತದೆ,ನಿಮಗೆ ಬೇಕಾದ ಅಳತೆಗೆ ಇದನ್ನು ಹೊಂದಾಣಿಕೆ ಮಾಡಿಕೊಳ್ಳಬಹುದು.





5.Hold the news paper making sure that the portion is inside.


೫.ನಾವು ರಚಿಸಿದಂತಹಾ ರಚನೆ ಮಧ್ಯದಲ್ಲಿ ಅಡಗಿರುವಂತೆ ವೃತ್ತ ಪತ್ರಿಕೆಯನ್ನು ಮೇಲಿನ ಚಿತ್ರಗಳಲ್ಲಿ ತೋರಿಸಿದಂತೆ ಮಡಚಿಕೊಳ್ಳಿ.





6.Fold the left and right corners , as shown in the above pictures.

೬.ಮೇಲಿನ ಚಿತ್ರಗಳಲ್ಲಿ ತೋರಿಸಲ್ಪಟ್ಟಂತೆ ಎಡ ಮತ್ತು ಬಲ ಮೂಲೆಗಳನ್ನು ಮಡಿಚಿಕೊಳ್ಳಿ.




7.Fold the news paper from the bottom as shown

೭.ವೃತ್ತ ಪತ್ರಿಕೆಯ ತಳ ಭಾಗದಿಂದ ಮೇಲಕ್ಕೆ, ಚಿತ್ರದಲ್ಲಿ ತೋರಿಸಿದಂತೆ ಮಡಚಿ



8.Keep the previous fold and fold it to make it touch the top.

೮.ಹಿಂದಿನ ಮಡಿಕೆಯನ್ನು ಬಿಡಿಸದೇ ಮತ್ತೊಮ್ಮೆ ಪೂರ್ತಿಯಾಗಿ ಮಡಚಿ.



9.Turn the news paper and fold the corners as shown in step 6, then fold the sides as shown in the above pictures.

೯.ವೃತ್ತ ಪತ್ರಿಕೆಯನ್ನು ತಿರುವಿ ಮತ್ತು ೬ನೇ ಕ್ರಮಾಂಕದಲ್ಲಿ ತೋರಿಸಿದಂತೆ ಮೂಲೆಗಳನ್ನು ಮಡಚಿ,ಬಳಿಕ ಚಿತ್ರದಲ್ಲಿ ತೋರಿಸಿದಂತೆ ಬದಿಗಳನ್ನು ಮಡಚಿ




11.As done earlier in step 7, fold from the bottom, as shown in the picture.

೧೦.ಬಳಿಕ ಹಿಂದಿನಂತೆಯೇ(step7) ಕೆಳಗಿನಿಂದ ಮೇಲಕ್ಕೆ ಸ್ವಲ್ಪ ಭಾಗವನ್ನು ಮಡಚಿ.




12.Fold the remaining porion also to cover till the top.

೧೩.ಉಳಿದ ಭಾಗವನ್ನೂ ಮೇಲೆಯವರೆಗೆ ಮಡಚಿ.





13.Open the fold little bit and lock it as shown.

೧೩.ಮಡಚಿದ ಭಾಗವನ್ನು ಸ್ವಲ್ಪ ಬಿಡಿಸಿಕೊಂದು ಅದನ್ನು ಚಿತ್ರದಲ್ಲಿ ತೋರಿಸಿದಂತೆ ಜೋಡಿಸಿ ಭದ್ರಪಡಿಸಿಕೊಳ್ಳಿ.






14.Now your gandhi hat is ready.

೧೪.ಈಗ ನಿಮ್ಮ ಗಾಂಧಿ ಟೋಪಿ ಸಿದ್ಧ.




ನಿಮ್ಮ ಅಭಿಪ್ರಾಯ