ಮೊದಲ ಬಾರಿ ನಾನು ಉಪನಯನದ ಬಳಿಕ ೫ ನೇ ತರಗತಿಯ ಬೇಸಿಗೆ ರಜೆಯಲ್ಲಿ ಒಲ್ಲದ ಮನಸ್ಸಿನಿಂದ ಅಪ್ಪನ ಒತ್ತಾಯಕ್ಕೆ ವೇದಪಾಠಶಾಲೆಗೆ ಹೋಗಬೇಕಾಯಿತು.
ನನ್ನ ಆ ಮೂರು ವರ್ಷಗಳ ಬೇಸಿಗೆ ರಜೆಯ ೧.೫ ತಿಂಗಳುಗಳ ನೆನೆಪುಗಳು ತುಂಬಾ ಖುಶಿ ಕೊಡುತ್ತವೆ.ಅಲ್ಲಿ ನನ್ನದೇ ವಯಸ್ಸಿನ ನನಗಿಂತ ಹೆಚ್ಚು ಅಥವಾ ಕಡಿಮೆ ವಯಸ್ಸಿನ ವಟುಗಳ ಜತೆಯಲ್ಲಿ ಬೆರೆತು ಕಳೆದ ಆ ಸಮಯಗಳು ಅಪೂರ್ವ ಅನುಭವಗಳು.ನಾನು ಅದೇ ಸಮಯದಲ್ಲಿ ಕಲಿತ ಒಂದು ಹಿಂದಿ ಕವಿತೆ ನೆನಪಾಗುತ್ತದೆ ಬಾರ್ ಬಾರ್ ಅತೀಹೆ ಮುಜ್ ಕೋ
ಮಧುರ್ ಯಾದ್ ಬಚ್ ಪನ್ ತೇರೀ ಆ ಸಮಯದಲ್ಲಿ ಪದ್ಯ ಏನೋ ಒಂದು ಐದು ಅಂಕಗಳ ಆಶೆಗೆ ಕಲಿತದ್ದು ಆದರೆ ಅದರ ಅರ್ಥ ಎಷ್ಟು ವಿಶಾಲವಾಗಿದೆ ಎಂದು ತಿಳಿದದ್ದು ಆ ಮೇಲೆಯೇ.
ನಮ್ಮ ಶಿಬಿರವನ್ನು ಹೊಗುವುದರ ಒಂದು ವಾರದ ಮೊದಲು ನಾನು ನನ್ನ ಅಜ್ಜನ ಮನೆಗೆ ಬಂದು ತಂಗಿದ್ದೆ.ಅಲ್ಲಿಂದ ಸುಬ್ರಹ್ಮಣ್ಯಕ್ಕೆ ೧೮ ಕಿ.ಮೀಗಳಾಗುತ್ತವೆ.
ಹೇಗೋ ಅಂತೂ ಒತ್ತಾಯದಿಂದ ಪಾಠಶಾಲೆಯ ಮೊದಲನೆಯ ವರ್ಷದ ಪ್ರಥಮ ದಿನ ತಂದೆ ತಾಯಿ ಜತೆಗೆ ವೇದಪಾಠಶಾಲೆಗೆ ಭಾರವಾದ ಹೆಜ್ಜೆ ಹಾಕಿದೆ.ಅಲ್ಲಿಗೆ ತಲುಪಿದ ಬಳಿಕ
ನಮ್ಮದೇ ಊರಿನ ಗೋಪಿ ನನಗೆ ಜತೆಯಾದ.
ಸ್ವಲ್ಪ ಹೋದಜೀವ ಬಂದಂತಾಯಿತು ನನಗೆ. "ಅಬ್ಬ ಇವ ಒಬ್ಬ ಆದರೂ ಇದ್ದಾನ್ನೆ ಸಧ್ಯಕ್ಕೆ "ಎಂದು ನಿಟ್ಟ್ಸುಸಿರು ಬಿಟ್ಟೆ.ಹೀಗೆ ಆದಿನ ನನ್ನ ಮತಾ ಪಿತರು ನನ್ನನ್ನು
೨ ತಿಂಗಳ ಅಜ್ನಾತವಾಸಕ್ಕೆ ಬಿಟ್ಟು ಭಾರವಾದ ಮನಸ್ಸಿನಿಂದ ಮನೆಗೆ ತೆರಳಿದರು.
ಯಾಕೋ ಏನೋ ಆ ದಿನ ಸಂಜೆ ಸಂಧ್ಯಾವಂದನೆ ಮಾಡುವಾಗ ಒಂದು ರೀತಿಯ ಏಕಾಂಗಿ ಎಂಬ ಭಾವ ನನ್ನನ್ನು ಕಾಡತೊಡಗಿತ್ತು.
ಊಟ ಮಾಡುವಾಗ ಊಟ ಬಡಿಸುತ್ತಿರುವ ಸಮಯದಲ್ಲಿ ಭಗವದ್ಗೀತೆ ಹೇಳುವುದು ನಮ್ಮ ಅಲ್ಲಿನ ಪರಿಪಾಠ.ನಮ್ಮ ಪುಸ್ತಕಗಳು ಆದಿನ ನಮ್ಮ ಕೈ್ಸೇರಿರಲಿಲ್ಲವಾದ್ದರಿಂದ ಭಗವದ್ಗೀತೆ ಏನೇನೋ ಕೇಳಿಸುತ್ತಿತ್ತು ನನಗೆ :D . ಅಂತೂ ಆದಿನ ಊಟ ಮಾಡಿ ರಾತ್ರಿ ಮರುದಿನದ ನಿರೀಕ್ಷೆಯಲ್ಲಿ ಮಲಗಿದೆ....
ಇನ್ನು ಪ್ರಾರಂಭವಾದದ್ದು ಸಿಂದಾಬಾದನ ಸಮುದ್ರಯಾನದಂತೆ ವಿಚಿತ್ರ ಪರಿಸ್ಥಿತಿಗಳು.ಬೆಳಗ್ಗೆ, ಮನೆಯಲ್ಲಿದ್ದಾಗ ಸೂರ್ಯೋದಯದ ಬಳಿಕ ಆತನೇ(ಸೂರ್ಯ) ನನ್ನನ್ನು ಎಬ್ಬಿಸಬೇಕಿತ್ತು ಆದರೆ ಪರಿಸ್ಥಿತಿ ಇಲ್ಲಿ ತದ್ವಿರುದ್ಧ ಅವನನ್ನು ನಾವೇ ಎಬ್ಬಿಸಬೀಕಿತ್ತು ಅದೂ ಅತ ಬೇಗನೆ ಏಳುವ ಆಸಾಮಿಯಲ್ಲ ನಾವು ಎದ್ದು ಒಂದೆರಡು ಘಂಟೆಯಾದರೂ ಬೇಕಿತ್ತು ಆತ ಏಳಲು :P.ಎದ್ದಮೇಲೆ ಶೌಚವಾಗಬೇಡವೇ ? ಅದಕ್ಕೆ ನಮಗಿದ್ದ ಆಸರೆ ಸಾರ್ವಜನಿಕ ಶೌಚಾಲಯ.ಅಲ್ಲಿ ಯಾವುದ್ಯಾವುದೋ ಲಿಪಿಗಳು ಗೋಡೆಯ ಮೇಲೆಲ್ಲಾ.ಏನೋ ನನಗಂತೂ ಒಂದಕ್ಕೂ ತಲೆ ಬುಡವಿಲ್ಲದಂತೆ ತೋರುತ್ತಿತ್ತು.ಅದಾದಬಳಿಕ ಬಿಸಿನೀರನ್ನು ನೆನೆಯುತ್ತಾ ತಣ್ಣೀರಿನಲ್ಲಿ ಸ್ನಾನ.. ಊಹುಹು ಆಹಹ ಸಂಗೀತಾಭ್ಯಾಸ.ನಮ್ಮ ಗೋಪಿ ಭಾರೀ ಚಾಲೂ ರಾತ್ರೆ ಅಡುಗೆ ಭಟ್ಟರು ಮರುದಿನದ ಗಂಜಿಗೆ ಇಟ್ಟಿದ್ದ ನೀರು ನಮ್ಮ ಸ್ನಾನಕ್ಕೆ ಸಂದಾಯವಾಗುತ್ತಿತ್ತು (ಕೆಲವೊಮ್ಮೆ ಮಾತ್ರ).ಮತ್ತೆ ಪಾತ್ರೆ ತಣ್ಣೀರಿನಿಂದ ತುಂಬಿಕೊಂಡು ತೆಪ್ಪಗೆ ಕೂತಿರುತ್ತಿತ್ತು ಒಲೆಯ ಮೇಲೆ ಏನೂ ಅರಿಯದವನಂತೆ(ಪಾತ್ರೆ ಪುಲ್ಲಿಂಗವೋ ಸ್ತ್ರೀ ಲಿಂಗವೋ ಎಂಬ confusion ಬೇಡ).
ಇನ್ನು ನಮಗೆ ಬೇರೆ ಕಾರ್ಯಕ್ರಮಗಳಿಲ್ಲ ಸುಮ್ಮನೆ ಗಂಜಿ ತಯಾರಾಗುವುದನ್ನು ಕಾಯ್ವ ಕೆಲಸ.ಅಷ್ಟರವರೆಗೆ ಆಮೇಲೆ ಎದ್ದವರಿಗೆ ನಮ್ಮ ಸ್ನಾನವಾಯಿತು
ಎಂದು ಜಂಭದಿಂದ ಹೇಳುವ ಕೆಲಸ.
ಜಪ ಎಷ್ಟೊತ್ತಿಗೆ ಮಾಡುತ್ತಿದ್ದನೋ ನೆನಪಿಲ್ಲ.ಅಂತೂ ಮಾಡುತ್ತಿದ್ದೆ ಅನ್ನೋದು ನಮ್ಮ ಹನುಮಂತನಿಗೂ ಗೊತ್ತು.
ಹಾಂ ನಮ್ಮ ಹನುಮಂತ ಯಾರು ಅಂತ ಕುತೂಹಲ ಬಂತಾದ್ರೆ ಒಳ್ಳೇದು..
Keep Guessing ನಂಗೆ type ಮಾಡಿ ಕೈ ನೋಯೊಕ್ಕೆ ಪ್ರಾರಂಭವಾಯ್ತು.. ಹನುಮಂತನಜತೆಗೆ ನಿಮ್ಮ ಭೇಟಿ ಮುಂದಿನ Post ನಲ್ಲಿ
ನಮಸ್ಕಾರ.
ವೇದಪಾಠಶಾಲೆಲಿ ಇದ್ದದು ಇವ
1 comment:
ಹನುಮಂತ ಬರಲಿ ಬೇಗ ಎಂದು ಆಶಿಸುವೆ.... :)
Post a Comment