ಅರ್ಥವಿಲ್ಲದಿರಬಹುದು ಲೋಕಕ್ಕೆ
ರಾತ್ರಿಯ ಅಲೌಕಿಕ ಭಾವದೊಳಗೆ
ಎಷ್ಟೊಂದು ವಿಧದ ಆರ್ದ್ರ ಭಾವಗಳು
ನಿಶ್ಶಬ್ದದೊಳಗಿನ ಶಬ್ದದೊಳಗೆ
ಭಾವವಿಲ್ಲದಿಹ ಭಾವಗಳು ಬೆಸೆಯಬಲ್ಲವು ರಾತ್ರಿಗಳ
ರಹಸ್ಯಗಳ ಮಣಿಗಳು ರಾತ್ರಿಮಾಲೆಯ ಹೆಣೆದಿಹವು
ಸ್ಥಿರವಾಗಿ ಚಲಿಸುತ್ತಿಹ ಮನ ಚಲಿಸುತ್ತಲಿ ಸ್ಥಿರವೂ ಅಹುದು
ಎನೇನೋ ದ್ವಂದ್ವಗಳು ಬರಿ ಎರಡಲ್ಲ
ಮುಗಿಲ್ಮುಟ್ಟಿದೆ ಮೋಟು ಮುದಿನಾಯಿಯ ಕೂಗು
ಜತೆ ಸೇರಿದೆ ಕೊನೇ ಮೋಟಾರಿನ ಎಂಜಿನ್ನಿನ ಕಿರ್ರು
ಝೀರುಂಡೆಯ ಝೀ ಎನ್ನುವ ಝೇಂಕಾರದ ಝಿಲ್ಲು
ಶಬ್ದವೇಧಿಗೆ ತೊಡಗಿಹ ಕರಿ ಬಾವಲಿಗಳ ಶಿಳ್ಳು
ಮುಂಜಾವಿನ ವೇಳೆಗೆ ಆಭರಣದ ತೆರ ಭುವಿಯನ್ನು
ಆವರಿಸಲು ಮಂಜಿನ ಹನಿ ಅವಸರಿಸದೆ ಬರುತಿಹನು
ತಂಗಾಳಿಯು ಬರೆಯುತ್ತಿಹ ನೀರವತೆಯ ಭಾಷ್ಯ್ತ
ಚುಂಬಿಸುತಲಿ ಗಿಡಮರಗಳ ಚಿಗುರನು ಕೆಣಕಿಹನು
ಕೊನೆಬೀದಿಯ ಕಡೆಯಿಂದಲಿ ಪಹರೆಯ ಸೀಟಿ
ಏಕಾಂತವ ಅನುಭವಿಸುತ್ತಿದೆ ಇರುಳಲಿ ಬಡ ರಸ್ತೆಗಳು
ಕನಲುತ್ತಲಿ ತಾ ಪಡೆದಿಹ ಇನಿಯಳ ಸಿಹಿಮುತ್ತನ್ನು
ಕಾದಿಹನಿವ ಕನಸಿನ ಬೀದಿಯೊಳಾಕೆಯ ಬರವನ್ನು
ಎಲೆಮರಗಳು ಸಹ ಸದ್ದಿಲ್ಲದೆ ನಿದ್ದೆಗೆ ಸರಿದಿಹವು
ಜಗಬೆಳಗುತ ಎಂದಿನ ತೆರ ದೀಪದ ಕಂಭಗಳು
ಕ್ರಿಮಿಕೀಟಗಳೂ ಮಂಡೂಕಗಳೂ ಸಭೆ ಜಂಟಿಯ ಕರೆದಿಹವು
ಕಿರ್ರ್ ಕಿರ್ರೆನ್ನುತ ಟರ್ರ್ ಟರ್ರೆನ್ನುತ ಸಭೆ ರಂಗೇರಿಹುದು
ಮೋಡಗಳೆಡೆಯಿಂದಲಿ ಶಶಿ ಬಾಂದಳದಲಿ ನಿಂದು
ಭುವಿ ಮಲಗಿರುವುದ ಕಾಣುತ್ತಲೆ ಮುದಗೊಂಡಿಹನಿಂದು
ಮೂರ್ಲೋಕವೆ ನಿದ್ರೆಯ ಸವಿಯೊಳುಮಲಗಿರಲು
ನೀರವತೆಯು ಕಾಡಿರುವನು ಇರುಳನು ಯಾಕಿಂದು ?!
ಇದೇ ರೀತಿಯ ಇನ್ನೊಂದು ಕವನಕ್ಕೆ ಇಲ್ಲಿ ಬನ್ನಿ
3 comments:
ರಾತ್ರಿ ಎಲ್ಲಾ ನಿದ್ದೆ ಮಾಡ್ಲಿಲ್ಲ ಅಂತಾಯ್ತು.. ಛೆ!! ಇದೆಲ್ಲ ನದೆಯುವಾಗ ನಾನು ಮಲಗಿದ್ದೆ..!! ನನಗೂ ಅನುಭವಿಸಬೇಕು ಒಮ್ಮೆ ಇವರ ಸಭೆ.. ಸುಂದರ ಕವನ..photo ಸಹ.. ಚೆನ್ನಾಗಿದೆ.. continue.. good luck..
ಪ್ರತೀ ದಿನ ಈ ರೀತಿ ಎಲ್ಲಾ ಇರೋದಿಲ್ಲ ..
ಕೆಲವೊಮ್ಮೆ ಮಾತ್ರ ಎಲ್ಲವೂ ಸಿಗಬಹುದಷ್ಟೆ ...
super work yar.....i have no words to apreciate you good all the best continue your work.......
Post a Comment